cultural milestones

Basava Vedike
ಬಸವ ವೇದಿಕೆ

ಬೆಂಗಳೂರಿನ ವಿಚಾರವಂತ ಸಹೃದಯಿಗಳು ಬಸವಾದಿ ಶರಣರ ವಿಚಾರಗಳನ್ನು ಅರಿತುಕೊಂಡು,ಅವುಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪ್ರಚಾರ ಮಾಡಲು ಒಂದು ಸಂಘಟನೆಯ ಅಗತ್ಯವನ್ನು ಮನಗಂಡರು. ಶರಣರ ವೈಚಾರಿಕ ಹಾಗೂ ಜಾಗೃತ ಮನೋಭಾವ ಹೊಂದಿದವರನ್ನು , ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿರುವ ಮಹನೀಯರನ್ನು ಗುರುತಿಸಿ ಬಸವ ಜಯಂತಿ ಅಚರಣೆಯ ಸಮಾರಂಭದಲ್ಲಿ ಗೌರವಿಸುವ ಒಂದು ವಿನಮ್ರ ಪ್ರಯತ್ನವು ಬಸವ ವೇದಿಕೆ ಅಶ್ರಯದಲ್ಲಿ ಅತ್ಯಂತ ಯಶಸ್ವಿಯಾಗಿ ಮುಂದುವರೆದುಕೋಂಡು ಬರುತ್ತಿದೆ.....

Udaya Shankara Awards
ಉದಯ ಶಂಕರ ಪ್ರಶಸ್ತಿ

ಕನ್ನಡ ಚಲನಚಿತ್ರರಂಗದ ಹಿರಿಯ ಚಿತ್ರಸಾಹಿತ್ಯದ ಬಹುದೊಡ್ಡ ಸಾಧಕರಾದ ಚಿ. ಉದಯಶಂಕರ್ ಅವರ ನೆನಪಿನಲ್ಲಿ ಚಿ. ಉದಯಶಂಕರ್ ಪ್ರಶಸ್ತಿ ಪ್ರತಿಷ್ಟಾನವನ್ನು ಪ್ರಾರಂಭಿಸಲಾಯಿತು. 2000 ನೇ ಇಸವಿಯಲ್ಲಿ ವರನಟರಾದ ಡಾ. ರಾಜ್ ಕುಮಾರವರ ಶುಭಹಾರೈಕೆಯೊಂದಿಗೆ ಆರಂಭವಾದ ಈ ಸಂಸ್ಥೆಗೆ ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರವರು ಪೋಷಕರಾಗಿರುತ್ತಾರೆ. ಹಿರಿಯನಟಿಯರಾದ ಶ್ರೀಮತಿ ಜಯಂತಿ, ಶ್ರೀಮತಿ ಜಯಮಾಲ, ಹಿರಿಯ ನಿರ್ಮಾಪಕರಾದ ಶ್ರೀ ಚಿನ್ನೇಗೌಡ, ಕೆ. ಸಿ. ಎನ್. ಚಂದ್ರು, ಹಿರಿಯ ನಿರ್ದೇಶಕರಾದ ಶ್ರೀ ಕೆ. ಎಸ್. ಎಲ್. ಸ್ವಾಮಿ ಅವರನ್ನೊಳಗೊಂಡ ಈ ಸಮಿತಿ ಯಲ್ಲಿ ನಾನು ಕಾರ್ಯಾಧ್ಯಕ್ಷನಾಗಿ ಕಾರ್ಯಾನಿರ್ವಹಿಸುತ್ತಿದ್ದೆನೆ...

Samskruthy Sangama
ಸಾಂಸ್ಕೃತಿ ಸಂಗಮ

ಸುಮಾರು ನಾಲ್ಕು ದಶಕಗಳ ಕಾಲ ಸರ್ಕಾರದ ವಿವಿಧ ಇಲಾಖೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ನನಗೆ ಸಾಹಿತ್ಯ, ಸಂಸ್ಕೃತಿ,ಕಲೆಗಳ ಅಭಿರುಚಿ ಬಾಲ್ಯದಿಂದಲೇ ಮೂಡಿಬಂದಿದ್ದು ನನ್ನ ಬದುಕಿನ ಸೌಭಾಗ್ಯವೇ ಎಂದು ಭಾವಿಸಿರುತ್ತೇನೆ. ವಿದ್ಯಾರ್ಥಿ ದೆಸೆಯಿಂದಲೂ ಸಾಹಿತ್ಯ,ಸಂಸ್ಕೃತಿ, ಕಲೆಗಳ ಸೇವಾದೀಕ್ಷೆಯನ್ನು ಪಡೆದುಕೊಂಡಿದ್ದ ನನಗೆ ನನ್ನ ಆಡಳಿತಾತ್ಮಕ ಕಾರ್ಯ ನಿರ್ವಹಣೆಯ ಸಂದರ್ಭದಲ್ಲಿ ಮಾರ್ಗದರ್ಶನ ನೀಡಿದ್ದು‌ಈ ಸಾಹಿತ್ಯಿಕ ಚಿಂತನೆಯ ಅನುಭಾವದ ಮೂಸೆಯಲ್ಲಿ ಮೂಡಿಬಂದ ಮಾನವೀಯ ಸಂವೇದನೆಯೇ ಎಂದರೆ ಅತಿಶಯೋಕ್ತಿಯಲ್ಲ...

ಗುರು ಕಾರುಣ್ಯ

testimonial image

ವಚನ ಸಾಹಿತ್ಯ ಪ್ರೇಮಿಗಳಾಗಿ,ಸಂಶೋಧಕರಾಗಿ,ಅತ್ಯತ್ತಮ ಭಾಷಣಕಾರರಾಗಿ ,ಸಾಹಿತ್ಯ ಕ್ರುಷಿಕೃತ್ಯ ಕಯಕನಿಷ್ಠರಾಗಿ ,ವಚನ ಸಾಹಿತ್ಯದ ತಮ್ಮ ಪ್ರೌಢ ಪ್ರಬಂಧಕ್ಕಾಗಿ ಕನ್ನಡ ವಿಶ್ವವಿದ್ಯಾಲಯದಿಂದ "ಡಿಲಿಟ್" ಪದವಿ ಪಡೆದವರಾಗಿ,ಭಾರತೀಯ ಅಡಳಿತ ಸೇವಾ ಪದವಿಗೆ ರತ್ನಭೂಷಣರಾಗಿ,ನೂರಾರು ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಪುರಸ್ಕೃತರಾಗಿ,ಅರವತ್ತರ ನವವಸಂತಕ್ಕೆ ಶ್ರೀಕಾರ ಬರೆಯುತ್ತಿರುವ ಶ್ರೀಯುತರು ವಿನಯ ಸೌಜನ್ಯಗಳ ಸದುವಿನಯ ಮೃದುವಚನಗಳ ನಗೆಮುಗುಳು ಸರಸ ಸರಳ ಹೃದಯವಂತರು. ಶ್ರೀಯುತರಿಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಿರುವುದು ಶ್ಲಾಘನೀಯವಾದುದಾಗಿದೆ.
"ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರು ಎಂಬ ಬಸವಣ್ಣನವರ ಸೊಲ್ಲಿನಂತೆ ಡಾ. ಸಿ. ಸೋಮಶೇಖರ ಅವರು ಎಲ್ಲೆಲ್ಲಿಯು ಸಲ್ಲುವಂಥವರು .ಶ್ರೀ ಸಿದ್ಧಗಂಗಾ ಗುರುಪರಂಪರೆ ಶ್ರೀಯುತರಿಗೆ ಸಕಲ ಸನ್ಮಂಗಳವನ್ನು ಅನುಗ್ರಹಿಸಲಿ ಎಂದು ಹಾರೈಸುತ್ತೇವೆ. "

ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು  ಪರಮಪೂಜ್ಯ ಜಗದ್ಗುರು
testimonial image

ಕರ್ನಾಟಕ ಸರ್ಕಾರದಲ್ಲಿ ಮೂರೂವರೆ ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಡಾ. ಸಿ. ಸೋಮಶೇಖರರವರು ದಕ್ಷ ಆಡಳಿತಗಾರರಲ್ಲಿ ಒಬ್ಬರು. ಅನೇಕ ಉನ್ನತ ಹುದ್ದೆಗಳಲ್ಲಿದ್ದು ಜನಮೆಚ್ಚುಗೆ ಗಳಿಸಿದವರು. ಜನಪರ ಕಾರ್ಯಗಳಲ್ಲಿ, ಯೋಜನೆ-ಯೋಚನೆಗಳಲ್ಲಿ ಪ್ರಸನ್ನತೆಯಿಂದ ಸ್ಪಂದಿಸುವ ಬಹುಮುಖ ವ್ಯಕ್ತಿತ್ವವುಳ್ಳವರು.ಬಹುಕಾಲದಿಂದ ಶೀ ಸುತ್ತೂರು ಮಠದ ಅಬಿಮಾನಿಗಳೂ ಬಕ್ತರೂ ಆದ ಡಾ. ಸೋಮಶೇಖರರವರು ಶರಣಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದು ಹಲವಾರು ಕೃತಿಗಳ ಲೇಖಕರಾಗಿದ್ದಾರೆ. ವಚನಗಳಲ್ಲಿ ಸಾಮಾಜಿಕ ಚಿಂತನೆ ಪ್ರೌಡಪ್ರಭಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಪದವಿ ಪಡೆದಿರುವ ಇವರು ತಮ್ಮ ಹರಿತವಾದ ವಿಚಾರದಾರೆಯಿಂದ ಜನಮನವನ್ನು ತಲುಪುವ ಅಸಾಧಾರಣ ಸಾಮರ್ಥ್ಯವುಳ್ಳ ವಾಗ್ಮಿಗಳು. ವಿದೇಶಗಳಲ್ಲಿ ಹಲವಾರು ಸಮ್ಮೇಳನಗಳಲ್ಲಿ ಭಾಗವಹಿಸಿ ಕನ್ನಡ ಸಾಹಿತ್ಯ-ಸಂಸ್ಕೃತಿಯ ಕಂಪನ್ನು ಪಸರಿಸಿರುವ ಹೆಗ್ಗಳಿಕೆ ಇವರದಾಗಿದೆ.

ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು  ಪರಮಪೂಜ್ಯ ಜಗದ್ಗುರು
testimonial image

ಡಾ. ಸಿ. ಸೋಮಶೇಖರ ಅವರು ಸರಳ ಸಜ್ಜನಿಕೆಯ ಆದರ್ಶ ಅಧಿಕಾರಿಗಳು. ಧರ್ಮ, ಸಂಸ್ಕ ತಿ ಪರಂಪರೆಗಳ ಅರಿವು ಉಳ್ಳವರು. ಹಲವು ಹತ್ತು ರಂಗದಲ್ಲಿ ಅವರು ಮಾಡಿದ ಕೃಷಿ ಸಾಮಾನ್ಯವಾದುದಲ್ಲ. ನಿರಂತರ ಕ್ರಿಯಾಶೀಲ ಬದುಕಿನಿಂದಾಗಿ ಏನೆಲ್ಲ ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಪ್ರಾಪ್ತವಾಗಿವೆ. ಮೂರು ದಶಕಗಳಿಂದ ಮಾಡಿದ ಸೇವೆಯನ್ನು ಎಲ್ಲರೂ ಗುರುತಿಸುವಂತಾಗಿದೆ. ನಾಡು-ನುಡಿಗಳ ಸಂವರ್ಧನೆಗಾಗಿ ಶ್ರಮಿಸಿದ ಅವರ ಬದುಕು ನಿಜವಾಗಲೂ ಸಾರ್ಥಕ. ದಕ್ಷ ಅದಿಕಾರಿಯಾಗಿ, ಸ್ನೇಹಜೀವಿಯಾಗಿ, ಬಾಳಬಾಂಧಳದಲ್ಲಿ ಅವರು ಮೂಡಿಸಿರುವ ಹೆಜ್ಜೆಯ ಗುರುತುಗಳು ಎಂದೆಂದಿಗೂ ಮಾಸಲಾರವು. ಮಠದ ಪರಮ ಭಕ್ತರಾದ ಡಾ. ಸಿ. ಸೋಮಶೇಖರ ಅವರು ಆರೋಗ್ಯವಂತರಾಗಿ ನೂರಾರು ವರುಷ ಬಾಳಿ ಬದುಕಿ ನಾಡಿಗೆ-ಜನತೆಗೆ ಸಂತೋಷ ಉಂಟುಮಾಡಲಿ. ಜನಸಮುದಾಯದಲ್ಲಿ ಬಾರತೀಯ ಸಂಸ್ಕ ತಿ, ಆಚಾರ್ಯರ ಆದರ್ಶ ಮತ್ತು ಶರಣರ ಅರಿವು ಮೂಡಿಸುವ ಮಹತ್ಕಾರ್ಯ ಮಾಡುವಂತಾಗಲಿ.

ಪಸನ್ನ ರೇಣುಕ ವೀರಸೋಮೆಶ್ವರ ರಾಜದೇಶಿಕೆಂದ್ರ ಶಿವಾಚಾರ್ಯ ಬಗವತ್ಪಾದರು.  ಪರಮಪೂಜ್ಯ ಜಗದ್ಗುರು
testimonial image

ಅವರು ಅದಿಕಾರದ ದರ್ಪವಿಲ್ಲದೆ ಸಾರ್ವಜನಿಕ ಬದುಕಿನಲ್ಲಿ ತಮ್ಮ ಬದುಕನ್ನು ಹಸನುಗೊಳಿಸಿಕೊಂಡವರು. ಸರಳ, ಸ್ವಾಭಿಮಾನ ಹಾಗೂ ಗೌರವಾನ್ವಿತವಾದ ಜೀವನ ನಡೆಸುತ್ತಿರುವ ಇವರು ಶ್ರೀಮಠದ ಜೊತೆಗೆ ಅನನ್ಯ ಸಂಬಂಧವನ್ನಿಟ್ಟುಕೊಂಡಿದ್ದಾರೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ, ಪ ಸ್ತುತ ಕರ್ನಾಟಕ ಸರ್ಕಾರದ ಕಾರ್ಯದರ್ಶಿ ಸ್ಥಾನದಿಂದ ಸೇವೆ ಸಲ್ಲಿಸುತ್ತಿರುವ ಇವರ ಸೇವೆ ಅನುಪಮವಾದುದು.ಶರಣರ ವಿಚಾರಧಾರೆಗಳನ್ನು ಪ್ರಭಾವ- ಪೂರ್ಣವಾಗಿ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿರುವುದು ಸಂತೃಪ್ತಿಗೆ ಕಾರಣವಾಗಿದೆ. ಅವರೊಬ್ಬ ಅದ್ವಿತೀಯ ವಾಗ್ಮಿಗಳು ಸರಳ ಸಜ್ಜನಿಕೆಯ ಹಾಗೂ ವಿಶೇಷವಾಗಿ ಸ್ನೇಹಶೀಲ ವ್ಯಕ್ತಿಯಾಗಿ ಬದುಕನ್ನು ನಡೆಸುತ್ತ ಬಂದಿರುವುದು ಸ್ವಾಗತಾರ್ಹ. ಹಲವಾರು ಗೋಷ್ಠಿಗಳು, ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಬಾಗವಹಿಸುವುದರೊಂದಿಗೆ ತಮ್ಮ ಅಪೂರ್ವ ಜ್ಞಾನವನ್ನು ಸಮಾಜೋದ್ಧಾರಕ್ಕಾಗಿ ಧಾರೆಯೆರೆದವರು.

ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಮಹಾಸ್ವಾಮಿಗಳು  ಪರಮಪೂಜ್ಯ ಜಗದ್ಗುರು
testimonial image

ಡಾ. ಸಿ. ಸೋಮಶೇಖರ ಅವರು ನಾಡು ನುಡಿಗಳಿಗೆ ಸಮರ್ಪಣಾಭಾವದಿಂದ ದುಡಿಯುತ್ತಿರುವ ಕಟ್ಟಾಳು ಕಾರ್ಯಕರ್ತರಾಗಿದ್ದಾರೆ. ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳನ್ನು ಕನ್ನಡದಲ್ಲಿ ಉತ್ತರಿಸಿದವರಲ್ಲಿ ಪ್ರಥಮರೆಂಬ ಹೆಗ್ಗಳಿಕೆ ಹಾಗೂ ನಾಡು ನುಡಿಯ ಮೇಲಿನ ಅಭಿಮಾನದಿಂದ ಕೇಂದ್ರ ಪ್ರಥಮದರ್ಜೆ ಸೇವೆಯನ್ನು ನಿರಾಕರಿಸಿದ ದಿಟ್ಟತನ ಅವರದ್ದು. ಶ್ರೀಮಠದ ಅಭಿಮಾನಿಗಳಾದ ಡಾ. ಸೋಮಶೇಖರ ಅವರಿಗೆ ವಿಶ್ವಬಂಧು ಮರುಳಸಿದ್ಧರು ಹಾಗೂ ಬಸವಾದಿ ಶಿವಶರಣರು ಆಯುರಾರೋಗ್ಯ ಬಾಗ್ಯಗಳನ್ನು ಕರುಣಿಸಲಿ ಎಂದು ಮನಸಾರೆ ಹಾರೈಸುತ್ತೇವೆ.

ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು  ಪರಮಪೂಜ್ಯ ಜಗದ್ಗುರು
testimonial image

ಅವರು ಅದಿಕಾರದ ದರ್ಪವಿಲ್ಲದೆ ಸಾರ್ವಜನಿಕ ಬದುಕಿನಲ್ಲಿ ತಮ್ಮ ಬದುಕನ್ನು ಹಸನುಗೊಳಿಸಿಕೊಂಡವರು. ಸರಳ, ಸ್ವಾಭಿಮಾನ ಹಾಗೂ ಗೌರವಾನ್ವಿತವಾದ ಜೀವನ ನಡೆಸುತ್ತಿರುವ ಇವರು ಶ್ರೀಮಠದ ಜೊತೆಗೆ ಅನನ್ಯ ಸಂಬಂಧವನ್ನಿಟ್ಟುಕೊಂಡಿದ್ದಾರೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಕರ್ನಾಟಕ ಸರ್ಕಾರದ ಕಾರ್ಯದರ್ಶಿ ಸ್ಥಾನದಿಂದ ಸೇವೆ ಸಲ್ಲಿಸುತ್ತಿರುವ ಇವರ ಸೇವೆ ಅನುಪಮವಾದುದು. ಶರಣರ ವಿಚಾರಧಾರೆಗಳನ್ನು ಪ್ರಭಾವ- ಪೂರ್ಣವಾಗಿ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿರುವುದು ಸಂತೃಪ್ತಿಗೆ ಕಾರಣವಾಗಿದೆ. ಅವರೊಬ್ಬ ಅದ್ವಿತೀಯ ವಾಗ್ಮಿಗಳು ಸರಳ ಸಜ್ಜನಿಕೆಯ ಹಾಗೂ ವಿಶೇಷವಾಗಿ ಸ್ನೇಹಶೀಲ ವ್ಯಕ್ತಿಯಾಗಿ ಬದುಕನ್ನು ನಡೆಸುತ್ತ ಬಂದಿರುವುದು ಸ್ವಾಗತಾರ್ಹ. ಹಲವಾರು ಗೋಷ್ಠಿಗಳು, ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಬಾಗವಹಿಸುವುದರೊಂದಿಗೆ ತಮ್ಮ ಅಪೂರ್ವ ಜ್ಞಾನವನ್ನು ಸಮಾಜೋದ್ಧಾರಕ್ಕಾಗಿ ಧಾರೆಯೆರೆದವರು.

ಶೀ ಮ.ನಿ.ಪ . ಶ್ರೀ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳುಮಿಗಳು  ಪರಮಪೂಜ್ಯ ಜಗದ್ಗುರು

Books

ಚಿಂತನ ಚೇತನ

"ಚಿಂತನ ಚೇತನ" ಡಾ.ಸಿ.ಸೋಮಶೇಖರ ಅವರ ಚೈತನ್ಯಪೂರ್ಣ ಚಿಂತನೆಗಳ ಗುಚ್ಚ. ಈ ಮೊದಲು ಬಿಡಿಬಿಡಿಯಾಗಿ ಪ್ರಕಟ ಗೊಂಡ ಅವರ ಲೇಖನಗಳು ಮತ್ತು ಅನೇಕ ಸಂದರ್ಭಗಳಲ್ಲಿ ನೀಡಿದ ಬಾಷಣಗಳು ಈಗ ಇಡಿಯಾದ ಪುಸ್ತಕ ರೂಪದಲ್ಲಿ ನಮಗೆ ಲಭ್ಯ.

ಚಿಂತನ ಚಿಲುಮೆ

ಇದೀಗ ನೀವು ಒದುತ್ತಿರುವ ಚಿಂತನ ಚಿಲುಮೆ ವಿವಿಧ ಸಂದರ್ಭದಲ್ಲಿ ಧೀರ್ಘ ಕಾಲದ ಅಂತರದಲ್ಲಿ ವಿವಿಧ ವಿಷಯಗಳ ಬಗ್ಗೆ ಬರೆದ ಒಂದು ಕಿರುಸಂಗ್ರಹ.ಹೆಚ್ಚಾಗಿ ಕಾಲೇಜಿನ ವ್ಯಾಸಂಗದ ಅವಧಿ ಯಲ್ಲಿ ಬರೆದ ಇ ಲೇಖನಗಳು....

ಚಿಂತನ ಕಿರಣ

ಇದೀಗ ನಿಮ್ಮ ಕೈಯಲ್ಲಿರುವ ನನ್ನ ಎರಡನೆಯ ಕೃತಿ "ಚಿಂತನ ಕಿರಣ" ವಿವಿಧ ಲೇಖನಗಳ ಕಿರುಸಂಗ್ರಹ. ವಿವಿಧ ಸಂದರ್ಭಗಳಲ್ಲಿ ವಿವಿಧ ವಸ್ತುಗಳ ಬಗ್ಗೆ ಕುರಿತಾಗಿ ಈ ಲೇಖನಗಳು ವೈವಿಧ್ಯಮಯವಾಗಿವೆ,ಆಕಾಶವಾಣಿಯ ಚಿಂತನ ಕಾರ್ಯಕ್ರಮದಲ್ಲಿ ಪ್ರಸಾರವಾದ..

ವಿಶ್ವಕ್ಕೆ ಶರಣರು ನೀಡಿದ ಜೀವನ ದರ್ಶನ

ವಿಶ್ವದಲ್ಲಿ ಕಾಲಕಾಲಕ್ಕೆ ಅನೇಕ ರೀತಿಯ ಕ್ರಾಂತಿಗಳಾಗಿವೆ.ಆ ಯಾವ ಕ್ರಾಂತಿಯು ಬಸವಾದಿ ಶರಣರು ಮಾಡಿದಂತಹ ಸಮಗ್ರಕ್ರಾಂತಿಯನ್ನು ಹೋಲಲು ಸಾಧ್ಯವಿಲ್ಲ. ಇದಕ್ಕೆ ಮೂಲ ಕಾರಣ ಜಗತ್ತಿನ...

ವಚನಗಳಲ್ಲಿ ಸಾಮಾಜಿಕ ಚಿಂತನೆ

ಇದೀಗ ನೀವು ಒದುತ್ತಿರುವ ಚಿಂತನ ಚಿಲುಮೆ ವಿವಿಧ ಸಂದರ್ಭದಲ್ಲಿ ಧೀರ್ಘ ಕಾಲದ ಅಂತರದಲ್ಲಿ ವಿವಿಧ ವಿಷಯಗಳ ಬಗ್ಗೆ ಬರೆದ ಒಂದು ಕಿರುಸಂಗ್ರಹ.ಹೆಚ್ಚಾಗಿ ಕಾಲೇಜಿನ ವ್ಯಾಸಂಗದ ಅವಧಿ ಯಲ್ಲಿ ಬರೆದ ಇ ಲೇಖನಗಳು....

ಮುತ್ತಿನಹಾರ

ಡಾ: ಸಿ. ಸೋಮಶೇಖರ್‌ರವರು ಅರವತ್ತಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಅವರ ಅಪಾರ ಅಭಿಮಾನಿಗಳ ಬಳಗ ತಮ್ಮ ಅಭಿಮಾನದ ಸಂಕೇತವಾಗಿ ಮುತ್ತಿನಹಾರ ಎಂಬ ಅಭಿನಂದನಾ ಸಂಪುಟವನ್ನು ಅವರಿಗೆ ಪ್ರೀತಿಯಿಂದ ಅರ್ಪಿಸುತ್ತಿದ್ದಾರೆ.

ಚಿತ್ರವಿಹಾರ

ನಾನು ಬರೆದು ನಿಮ್ಮ ಮುಂದೆ ಇಟ್ಟಿರುವುದು ನನ್ನ ಆತ್ಮಕತೆಯಲ್ಲ, ಇದೊಂದು ನನ್ನ ಆತ್ಮ ನಿವೇದನೆ. ೫೯ ವರ್ಷಗಳ ಕಾಲದ ದೀರ್ಘಾವಧಿಯ ಬದುಕಿನಲ್ಲಿ ಬಾಲ್ಯದಿಂದ ನನ್ನ ನೆನಪಿನಂಗಳದಲ್ಲಿ ಸ್ಥಾಯಿಯಾಗಿ ಉಳಿದ ಕೆಲವೊಂದು ಸಂಗತಿಗಳನ್ನು, ಘಟನೆಗಳನ್ನು ಮಾತ್ರ ನೆನಪಿಸಿಕೊಂಡು ಇಲ್ಲಿ ದಾಖಲಿಸುತ್ತಿದ್ದೇನೆ...

ಮಾತೆಂಬುದು ಜ್ಯೋತಿರ್ಲಿಂಗ

ಮಾತೆಂಬುದು ಜ್ಯೋತಿರ್ಲಿಂಗ
ಸ್ವರವೆಂಬುದು ಪರತತ್ವ
ತಾಳೋಷ್ಠ ಸಂಪುಟವೆಂಬುದು ನಾದ ಬಿಂದು ಕಳಾತೀತ
ಗುಹೇಶ್ವರನ ಶರಣರು
ನುಡಿದು ಸೂತಕಿಗಳಲ್ಲ ಕೇಳಾ ಮರುಳೆ

ಪುಸ್ತಕ ಬಿಡುಗಡೆ ಸಮಾರಂಭ

ಇದೀಗ ನೀವು ಒದುತ್ತಿರುವ ಚಿಂತನ ಚಿಲುಮೆ ವಿವಿಧ ಸಂದರ್ಭದಲ್ಲಿ ಧೀರ್ಘ ಕಾಲದ ಅಂತರದಲ್ಲಿ ವಿವಿಧ ವಿಷಯಗಳ ಬಗ್ಗೆ ಬರೆದ ಒಂದು ಕಿರುಸಂಗ್ರಹ.ಹೆಚ್ಚಾಗಿ ಕಾಲೇಜಿನ ವ್ಯಾಸಂಗದ ಅವಧಿ ಯಲ್ಲಿ ಬರೆದ ಇ ಲೇಖನಗಳು....